ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡಿದ ನಿಶಾದ್, ನಿತೀಶ್ ಕುಮಾರ್ ಬೇರೆಡೆ ಮುಟ್ಟಿದ್ದರೆ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದು, ಅವರು ಕೂಡ ಒಬ್ಬ ಮನುಷ್ಯ. ಹಿಜಾಬ್ ಅನ್ನು ಮುಟ್ಟಿದ ಮಾತ್ರಕ್ಕೆ ಅವರನ್ನು ಈ ರೀತಿ ಬೇಟೆಯಾಡಬಾರದು ಎಂದಿದ್ದಾರೆ. ಸಚಿವ ನಿಶಾದ್ರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಸಮಾಜವಾದಿ ಪಕ್ಷದ ನಾಯಕಿ ಸುಮಿಯಾ ರಾಣಾ ದೂರು ದಾಖಲಿಸಿದ್ದಾರೆ.